SSC CHSL 2022 NOTIFICATION 4500 JOBS

 ಸಿಬ್ಬಂದಿ ನೇಮಕ ಆಯೋಗವು ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ (SSC CHSL Exam 2022 notification) ಅಧಿಸೂಚನೆಯನ್ನು ಪ್ರಕಟಿಸಿದ್ದು, ಈ ಪರೀಕ್ಷೆ ಮೂಲಕ ಸುಮಾರು 4500 ಹುದ್ದೆಗಳನ್ನು ಭರ್ತಿ ಮಾಡಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ವೇತನ,

SSC JOB NOTIFICATION 2022

ಅರ್ಜಿ ಶುಲ್ಕ, ಶೈಕಣಿಕ ಅರ್ಹತೆ ಸೇರಿದಂತೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.

ಪ್ರಮುಖ ದಿನಾಂಕಗಳು

- ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಲು ದಿನಾಂಕಗಳು 06-12-2022

- ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 04-01-2023 ರವರೆಗೆ

- ಆಫ್‌ಲೈನ್ ಚಲನ್ ಅನ್ನು ಉತ್ಪಾದಿಸಲು ಕೊನೆಯ ದಿನಾಂಕ ಮತ್ತು ಸಮಯ 04-01-2023 (23:00)

- ಆನ್‌ಲೈನ್ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಮತ್ತು ಸಮಯ 05-01-2023 (23:00)

- ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕ್‌ನ ಕೆಲಸದ ಸಮಯದಲ್ಲಿ) 06-01-2023 

ಹುದ್ದೆಗಳ ವಿವರ: 

ಎಸ್‌ಎಸ್‌ಸಿಯು ಡೇಟಾ ಎಂಟ್ರಿ ಆಪರೇಟರ್‌, ಲೋವರ್‌ ಡಿವಿಷನ್‌ ಕ್ಲರ್ಕ್‌/ ಜೂನಿಯರ್‌ ಸೆಕ್ರೆಟೇರಿಯಲ್‌ ಅಸಿಸ್ಟೆಂಟ್‌ ಹುದ್ದೆಗಳನ್ನು ಈ ನೇಮಕಾತಿ ಪರೀಕ್ಷೆ ಮೂಲಕ ಭರ್ತಿ ಮಾಡಲಿದೆ.

ವೇತನ ಎಷ್ಟು?: ಲೋವರ್‌ ಡಿವಿಷನ್‌ ಕ್ಲರ್ಕ್‌/ ಜೂನಿಯರ್‌ ಸೆಕ್ರೆಟೇರಿಯಲ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ 19,900 ರೂನಿಂದ 63,200 ರೂಪಾಯಿ ವೇತನ ಇರುತ್ತದೆ. ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಮಾಸಿಕ 25,500 ರೂ ಯಿಂದ 81,100 ರೂಪಾಯಿವರೆಗೆ ವೇತನ ನಿಗದಿಪಡಿಸಲಾಗಿದೆ.

ಏನು ಓದಿರಬೇಕು?

ಈ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತೇರ್ಗಡೆ ಹೊಂದಿರಬೇಕು. ಡಿಇಒ (ಡೇಟ್ ಎಂಟ್ರಿ ಆಪರೇಟರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ವಿಜ್ಞಾನ ವಿಭಾಗದಲ್ಲಿ 12ನೇ ತೇರ್ಗಡೆಯಾಗಿರಬೇಕು. ಇದಲ್ಲದೇ, ವಿದ್ಯಾರ್ಥಿಯು 12ನೇ ತರಗತಿಯಲ್ಲಿ ಗಣಿತವನ್ನ ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು.

ಅರ್ಜಿ ಸಲ್ಲಿಕೆ ಹೇಗೆ?

ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನದ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಅರ್ಜಿ ಶುಲ್ಕ ಎಷ್ಟು

ಸಿಬ್ಬಂದಿ ನೇಮಕಾತಿ ಆಯೋಗವು ನಡೆಸುವ SSC CHSL ಪರೀಕ್ಷೆಗೆ ಅರ್ಜಿ ಶುಲ್ಕ 100 ರೂಪಾಯಿ ಆಗಿದೆ. ಆದರೆ, ಮಹಿಳೆಯರಿಗೆ, SC, ST, ದೈಹಿಕ ವಿಕಲಚೇತನರು ಅಥವಾ ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿಲ್ಲ.

ವಯೋಮಿತಿ ಎಷ್ಟು?

ಎಸ್‌ಎಸ್‌ಸಿ ಸಿಎಚ್‌ಎಸ್‌ಎಲ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಜನವರಿ 01, 2022 ರಂತೆ 18 ರಿಂದ 27 ವರ್ಷಗಳ ನಡುವೆ ಇರಬೇಕು. ಸರಕಾರದ ನೀತಿ ನಿಯಮಗಳಂತೆ ವಯೋಮಿತಿಯಲ್ಲಿ ಎಸ್‌ಸಿ/ಎಸ್‌ಟಿ/ಒಬಿಸಿ ಮತ್ತು ಇತರೆ ಅರ್ಹ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುತ್ತದೆ.

ಎಸ್‌ಎಸ್‌ಸಿ CHSL ಪರೀಕ್ಷೆಯನ್ನ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಹಂತ ಒಂದರಲ್ಲಿ ವಿವರಣಾತ್ಮಕ ಪೇಪರ್, ಕೌಶಲ್ಯ ಪರೀಕ್ಷೆ ಅಥವಾ ಟೈಪಿಂಗ್‌ ಟೆಸ್ಟ್ ಆಗಿರುತ್ತದೆ. ಈ ಕಂಪ್ಯೂಟರ್ ಆಧರಿತ ವಸ್ತುನಿಷ್ಠ ಮಾದರಿ ಪರೀಕ್ಷೆ ನಡೆಸಲಾಗುತ್ತದೆ. ಟೈರ್-1 ಪರೀಕ್ಷೆಯಲ್ಲಿ ತೇರ್ಗಡೆಯಾದವರು ಟೈರ್-2ಗೆ ಅರ್ಹರಾಗಿರುತ್ತಾರೆ. ಶ್ರೇಣಿ-II ಪರೀಕ್ಷೆಯು ಆನ್‌ಲೈನ್‌ನಲ್ಲಿ ನಡೆಯಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಈಗಾಗಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಆನ್‌ಲೈನ್‌ ಮೂಲಕ ಈಗಲೇ ಅರ್ಜಿ ಸಲ್ಲಿಸಬಹುದು.

- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲ SSC ಅಧಿಕೃತ ವೆಬ್ಸೈಟ್ ssc.nic.inಗೆ ಭೇಟಿ ನೀಡಿ

- ನಂತರ ಮುಖಪುಟದಲ್ಲಿ 'SSC CHSL ಆನ್‌ಲೈನ್‌ ಅರ್ಜಿ ಸಲ್ಲಿಕೆ' ಲಿಂಕ್ ಮೇಲೆ ಕ್ಲಿಕ್‌ ಮಾಡಿ

- ನಂತರ ನೀವು ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು.

- ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು ಮತ್ತು ಇತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

- ಅಂತಿಮವಾಗಿ ಅರ್ಜಿ ಸಲ್ಲಿಸಿದ ನಂತರ.. ಅಭ್ಯರ್ಥಿಯು ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು

CHSL ಪರೀಕ್ಷೆಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಆಧಾರ್ ಕಾರ್ಡ್ , PAN ಕಾರ್ಡ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ನಂತಹ ಕೆಲವು ಐಟಿ ಪುರಾವೆಗಳನ್ನು ಹೊಂದಿರಬೇಕು.

ಅರ್ಜಿ ಶುಲ್ಕವನ್ನು ಪಾವತಿಸಲು ಡೆಬಿಟ್/ಕ್ರೆಡಿಟ್ ಕಾರ್ಡ್ ಅಗತ್ಯವಿದೆ. ವೆಚ್ಚ ಪ್ರಮಾಣ ಪತ್ರ, 10 ಮತ್ತು 12ನೇ ತರಗತಿ ಅಂಕಪಟ್ಟಿ, ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಅಭ್ಯರ್ಥಿಯ ಸಹಿ ಇತ್ಯಾದಿಗಳನ್ನು ಸ್ಕ್ಯಾನ್ ಮಾಡಬೇಕು. ಈ ಎಲ್ಲಾ ದಾಖಲೆಪತ್ರಗಳನ್ನು ಸಿದ್ಧವಿಟ್ಟುಕೊಂಡು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ssc.nic.in ಲಿಂಕ್‌ಗೆ ಭೇಟಿ ನೀಡಿ.


ಹೆಚ್ಚಿನ ಮಾಹಿತಿ ಪಡೆಯಲು ಈ ಕೆಳಗಿನ ವಿಡಿಯೋ ನೋಡಿ.



Comments