ಅವನೇ ಶ್ರೀಮನ್ನಾರಾಯಣ ನೋಡಿದ್ರಾ…? ಸಖತ್ತಾಗಿದೆ…

Published
  


Spread the love
ಬಹು ನಿರೀಕ್ಷಿತ `ಅವನೇ ಶ್ರೀಮನ್ನಾರಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ… ನಿರೀಕ್ಷೆಯಂತೆ  ಸಿನಿಮಾದ ಟ್ರೇಲರ್ ಸಖತ್ತಾಗಿ ಮೂಡಿಬಂದಿದೆ. ಸಿನಿಮಾ ಟ್ರೇಲರ್ ನೋಡಿದ್ರೆ ಕಥೆ ಹುಡುಕೋದು ಅಷ್ಟು ಸುಲಭವಿಲ್ಲ. ತಾಂತ್ರಿಕವಾಗಿ ಸಿನಿಮಾ ಅದೆಷ್ಟು ಶ್ರೀಮಂತವಾಗಿರಬಹುದು ಅನ್ನೋದನ್ನ ಟ್ರೇಲರ್ ನೋಡಿದ್ರೇನೇ ಗೊತ್ತಾಗುತ್ತೆ. ರಕ್ಷಿತ್ ಶೆಟ್ಟಿ ಖಾತೆಗೆ ಮತ್ತೊಂದು ಹಿಟ್ ಸಿನಿಮಾ ಸೇರುವ ಎಲಾ ಸಾಧ್ಯತೆ ಇದೆ… ಪೊಲೀಸ್ ಆಫೀಸರ್ ಪಾತ್ರದಲ್ಲಿದ್ದರೂ ಸಖತ್ ಕಾಮಿಡಿ ಮಾಡಿ ರಕ್ಷಿತ್ ಶೆಟ್ಟಿ ಮನಸ್ಸು ಗೆಲ್ಲಲಿದ್ದಾರೆ. ಶಾನ್ವಿ ಶ್ರೀವಾತ್ಸವ್ ರಕ್ಷಿತ್ ಜೊತೆಯಾಗಿದ್ದಾರೆ.. ಅಜನೀಶ್ ಲೋಕನಾಥ್ ಹಾಗೂ ಚರಣ್ ರಾಜ್ ಜೋಡಿ ಸಂಗೀತದ ಅಬ್ಬರ ಮಾಡಿದೆ.. ಪುಷ್ಕರ್ ಫಿಲ್ಮ್ಸ್ ಲಾಂಛನದಲ್ಲಿ ಬರ್ತಿರೋ `ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ನೀವೂ ನೋಡಿದ್ರೇನೆ ಅದರ ಮಜಾ ಗೊತ್ತಾಗೋದು…

Comments